ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ತಾಳಮದ್ದಳೆ ಸಪ್ತಾಹ 29ರಿಂದ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 26 , 2015
ಸೆಪ್ಟೆ೦ಬರ್ 26, 2015

ಯಕ್ಷಗಾನ ತಾಳಮದ್ದಳೆ ಸಪ್ತಾಹ 29ರಿಂದ

ಯಲ್ಲಾಪರ : ತಾಲೂಕಿನ ತೇಲಂಗಾರಿನಲ್ಲಿ ಮಹಾಭಾರತ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸ್ಥಳೀಯ ಮೆತ್ರಿ ಕಲಾ ಬಳಗ , ಯುವ ಬಳಗ , ಸೇವಾ ಬಳಗ ಹಾಗೂ ಹಾಲು ಉತ್ಪಾದಕರ ಸಂಘ ಸಂಯುಕ್ತ ಆಶ್ರಯದಲ್ಲಿ ಸೆ.29 ರಿಂದ ಅ.5 ರ ವರೆಗೆ ಮೆತ್ರಿ ಭವನದಲ್ಲಿ ನಡೆಯಲಿದೆ.

ಸಪ್ತಾಹವನ್ನು ಸೆ. 29 ರಂದು ಸಂಜೆ 5-45 ಕ್ಕೆ ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿ ಕುಂಬ್ರಿ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಗಜಾನನ ಭಟ್ಟ ಕಳಚೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ.ನಿರ್ದೇಶಕ ಟಿ.ಎನ್.ಭಟ್ಟ ನೆಡಿಗೆಮನೆ , ಆದರ್ಶ ಸೇ.ಸ.ಸಂಘದ ಅಧ್ಯಕ್ಷ ದತ್ತಾತ್ರೆಯ ಭಟ್ಟ , ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಎನ್.ಟಿ.ಗಾಂವ್ಕರ ತಾರಗಾರ , ಸಾಮಾಜಿಕ ಸೇವಾ ಕಾರ್ಯಕರ್ತ ವೆಂಕಟ್ರಮಣ ಭಾಗ್ವತ ಪಾಲ್ಗೊಳ್ಳುವರು.

6.15 ರಿಂದ 8-15 ರ ವರೆಗೆ ಶ್ರೀ ಲಕ್ಷ್ಮೀ ಮಹಿಳಾ ತಾಳಮದ್ದಳೆ ಕೂಟ ವರ್ಗಾಸರ ಶಿರಸಿ ಮಹಿಳೆಯರಿಂದ ಭೀಷ್ಮ ವಿಜಯ ಪ್ರಸಂಗ ನಡೆಯಲಿದೆ.

ಸೆ. 30 ರಂದು ಸಂಜೆ 5-45 ಕ್ಕೆ ಗ್ರಾಪಂ ಸದಸ್ಯ ನವೀನ ಬಾಂದೇಕರ ದೀಪ ಬೆಳಗಿಸುವರು. ವಿ.ಎನ್, ಭಟ್ಟ. ದತ್ತಾತ್ರೆಯ ಭಟ್ಟ ಗಿಡಗಾರಿ , ಆರ್.ಎ.ಭಟ್ಟ ತೋಟ್ಮನೆ, ಗೋಪಾಲ ಭಟ್ಟ ಮುಂಡಿಗೆ ತಗ್ಗು , ಜಿ.ಎನ್.ಕೋಮಾರ ವಜ್ರಳ್ಳಿ, ನರಸಿಂಹ ಸಾತೊಡ್ಡಿ , ಶ್ರೀಧರ ಅಣಲಗಾರ, ಸುಬ್ರಾಯ ಬಿದ್ರೆಮನೆ , ಕಲಾವಿದ ದಯಾನಂದ ದಾನಗೇರಿ , ಆರ್.ಎನ್.ಹೆಗಡೆ ನಂದಿಗದ್ದೆ ಉಪಸ್ಥಿತರಿರಲಿದ್ದಾರೆ. ಬನಶಂಕರಿ ಮಹಿಳಾ ಮಂಡಳ ನಂದಿಗದ್ದೆ ಗುಂದ ಮಹಿಳೆಯರಿಂದ ಭಕ್ತ ವಿಜಯ ಪ್ರಸಂಗ ಜರುಗಲಿದೆ.

ಅ. 01 ರಂದು ಸಂಜೆ 5-45 ಕ್ಕೆ ಗ್ರಾಪಂ ಸದಸ್ಯ ಪುಷ್ಪಾ ಆಗೇರ ದೀಪ ಬೆಳಗಿಸುವರು. ನಾಗೇಂದ್ರ ಕೋಣೆಮನೆ, ನಾರಾಯಣ ಗಾಂವ್ಕರ ಕಾಳುಕುಂಬ್ರಿ, ಸೀತಾರಾಮ ಹೆಗಡೆ ಬೀಗಾರ, ಕೆ.ಎಸ್, ಭಟ್ಟ ಆನಗೋಡ , ವೆಂಕಟ್ರಮಣ ರಾಮಪಾಲ ಶೆವಾಳಿ ಗೌರವ ಉಪಸ್ಥಿತರಿರಲಿದ್ದಾರೆ. ಕೀರ್ತಿ ಮಹಿಳಾ ತಾಳಮದ್ದಳೆ ಕೂಟ ಶೆವಾಳಿ ಮಹಿಳೆಯರಿಂದ ಶ್ರೀಕಷ್ಣ ಸಂದಾನ ಪ್ರಸಂಗ ಜರುಗಲಿದೆ.

ಸೆ. 02 ರಂದು ಗ್ರಾಪಂ ಸದಸ್ಯ ಸುಬ್ರಹ್ಮಣ್ಯ ಭಟ್ಟ ಬಾಗಿನಕಟ್ಟಾ ರವರು ದೀಪ ಬೆಳಗಲಿದ್ದಾರೆ. ಆರ್.ಎಂ.ಭಟ್ಟ ಭಟ್ಟು ಗೋಕರ್ಣ , ಶಿವರಾಮ ಹೆಗಡೆ ಬೀಗಾರ, ಜಿ.ಟಿ.ಭಟ್ಟ ದೇವಸ, ಶ್ರೀರಾಮ ಭಾಗ್ವತ ತಾರಿಕುಂಟೆ, ಮಂಜುನಾಥ ಗಾಂವ್ಕರ ಕಲ್ಮನೆ, ಜಿ.ಪಿ.ನಾಯ್ಕ ಮತ್ತಿಹಕ್ಕಲ್ ಗೌರವ ಉಪಸ್ಥಿತರಿರಲಿದ್ದಾರೆ. ಶ್ರೀ ಲಕ್ಷ್ಮೀ ನಾರಾಯಣ ತಾಳಮದ್ದಳೆ ಕೂಟ ದೇವರಗ್ಗೆ ನಂದೊಳ್ಳಿ ಅವರಿಂದ ಭೀಷ್ಮಾರ್ಜುನ ತಾಳಮದ್ದಳೆ ನಡೆಯಲಿದೆ.

ಅ.03ರಂದು ಪೂರ್ಣಿಮಾ ಹೆಗಡೆ ಸದಸ್ಯೆ ಗ್ರಾಪಂ ವಜ್ರಳ್ಳಿ ದೀಪಬೆಳಗಲಿದ್ದು , ಎಂ.ಎನ್.ಭಟ್ಟ ನಂದೊಳ್ಳಿ , ಜೆರಾಮ ಹೆಗಡೆ , ವೀರೂಪಾಕ್ಷ ಭಟ್ಟ ಬೆಳ್ಳಿಮನೆ, ಜಿ.ಎಂ.ಭಟ್ಟ ತೋಟ್ಮನೆ, ಸುಬ್ರಾಯ ಬಾಂದೆಕರ, ಜಿ.ಎನ್.ಭಟ್ಟ ಚಿಮನಳ್ಳಿ, ಎಂ.ಎನ್.ಭಟ್ಟ ಮುಖ್ಯಾಧ್ಯಾಪಕರು ಗೌರವ ಉಪಸ್ಥಿತರಿರಲಿದ್ದಾರೆ. ಶ್ರೀನಿಧಿ ಕಲಾ ಮತ್ತು ಸಾಂಸ್ಕೃತಿಕ ಕೂಟ ನಂದೊಳ್ಳಿ ಯುವತಿಯರಿಂದ ವಷಸೇನ ಕಾಳಗ ನಡೆಯಲಿದೆ.

ಅ.4ರಂದು ಹಿರಿಯ ಕಲಾವಿ ವೆಂಕಟ್ರಮಣ ಭಟ್ಟ ತೋಟ್ಮನೆ ದೀಪ ಬೆಳಗಲಿದ್ದು, ಟಿ.ವಿ.ಕೋಮಾರ, ದೀಪಾ ಕುರ್ಡೇಕರ, ಅನ್ನಪೂರ್ಣಾ ಭಟ್ಟ , ತಮ್ಮಣ್ಣ ಬೀಗಾರ, ನಾರಾಯಣ ಹೆಗಡೆ ಸುರಗಿಮನೆ, ಮಹಾಬಲೇಶ್ವರ ಭಟ್ಟ ಬಾಗಿನಕಟ್ಟಾ, ವೆಂಕಟ್ರಮಣ ಕಿರಗಾರತೆ, ಜಿ.ವಿ ಭಟ್ಟ ಅಡಿಕೆಮನೆ ಗೌರವ ಉಪಸ್ಥಿತರಿರಲಿದ್ದಾರೆ. ವಿಶೇಷ ಹ್ವಾನಿತರೊಡಗೂಡಿ ಮೆತಿ ್ರಕಲಾ ಬಳಗ ಕಲಾವಿದರು ಕರ್ಣ ಪರ್ವ ಪ್ರಸಂಗ ಪ್ರದರ್ಶಿಸಲಿದ್ದಾರೆ.

ಅ.5ರಂದು ಸಂಜೆ 5-45 ಕ್ಕೆ ಸನ್ಮಾನ ಹಾಗೂ ಮುಕ್ತಾಯ ಸಮಾರಂಭ ಜರುಗಲಿದ್ದು ನಾಟಿ ವೈದ್ಯರಾದ ನಾರಾಯಣ ಭಟ್ಟ ಗೇರಕೊಂಬೆ ಹಾಗೂ ಹಿರಿಯ ಕಲಾವಿದ ನಾರಾಯಣ ಅಡಿಕೆಪಾಲ ಇವರಿಗೆ ಸನ್ಮಾನ ನಡೆಯಲಿದೆ. ವಿದ್ವಾನ್ ಕಷ್ಣ ಭಟ್ಟ ಬೆಳ್ಳಿಮನೆ ಸಭಾಧ್ಯಕ್ಷತೆ ವಹಿಸಲಿದ್ದು ಸಪ್ತಾಹದ ಸಮಾರೋಪ ನುಡಿಯನ್ನು ಸಂಕಲ್ಪದ ಅಧ್ಯಕ್ಷ ಸಾಂಸ್ಕೃತಿಕ ರೂವಾರಿ ಪ್ರಮೋದ ಹೆಗಡೆ ಮಾಡಲಿದ್ದಾರೆ. ಮುಖ್ಯಾ ಅತಿಥಿಗಳಾಗಿ ಗ್ರಾಪಂ ಉಪಾದ್ಯಕ್ಷ ಪಾರ್ವತಿ ಭಟ್ಟ , ಸದಸ್ಯರಾದ ಜಿ.ಆರ್.ಭಾಗ್ವತ, ಸಹ್ಯಾದ್ರಿ ಸೇ.ಸ.ಸಂಘದ ಅಧ್ಯಕ್ಷ ಉಮೇಶ ಭಾಗ್ವತ , ಇಡಗುಂದಿ ಸೇ.ಸ.ಸಂಘದ ಅಧ್ಯಕ್ಷ ಪ್ರೇಮಾನಂದ ನಾಯ್ಕ , ಸ.ಶಿ.ಸ.ಅಧ್ಯಕ್ಷ ಆರ್.ಟಿ.ಭಟ್ಟ ಬೆಳ್ಳಿ ಆಗಮಿಸಲಿದ್ದಾರೆ. ನಂತರ ಯಕ್ಷಗಾನ ಹಾಗೂ ಸಾಂಸ್ಕೃತಿಕ ಸಂಘ ದಾರವಾಡ ಚೌಡೇಶ್ವರಿ ಹವ್ಯಾಸಿ ಯಕ್ಷಗಾನ ಮಂಡಳಿ ಕಾರವಾರ ಕಲಾವಿದರಿಂದ ಗದಾ ಯುದ್ಧ ಪ್ರಸಂಗ ಜರುಗಲಿದೆ.

ಭಾಗವತರಾಗಿ ಕಷ್ಣ ಹಳೆಮನೆ, ಅನಂತ ಹೆಗಡೆ ದಂತಳಿಗೆ, ಗಣಪತಿ ಭಟ್ಟ ತೋಟ್ಮನೆ, ತಿಮ್ಮಣ್ಣ ಭಾಗ್ವರ ಗಾಣಗದ್ದೆ, ಗಣಪತಿ ಭಟ್ಟ ಭರತೋಟ, ಮಂಜುನಾಥ ಹೆಗಡೆ ದಾರವಾಡ, ದಿನೇಶ ಭಟ್ಟ ಅಬ್ಬಿತೋಟ , ವೆಂಕಟ್ರಮಣ ಭಟ್ಟ ಚಂದಗುಳಿ ಆಗಮಿಸಲಿದ್ದಾರೆ.

ಮದ್ದಳೆ ವಾದಕರಾಗಿ ನರಸಿಂಹ ಹಂಡ್ರಮನೆ, ಗಣಪತಿ ಭಟ್ಟ ಬಿಡಾರ, ಗಣಪತಿ ಕಣ್ಣಿಜಡ್ಡಿ , ಶಿವರಾಮ ಕೋಮಾರ, ನಾಗಪ್ಪಾ ಕೋಮಾರ , ಶ್ರುತಿ ವಾದಕರಾಗಿ ಆರ್.ಜಿ.ಭಟ್ಟ ಬೆಳಸೂರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ , ಕಾರ್ಯದರ್ಶಿ ಮಂಜುನಾಥ ಗಾಂವ್ಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ